ಶುಭಂ ಕಳಸ ಗೆ ಮುಖ್ಯಮಂತ್ರಿ ಆಶೀರ್ವಾದ

ಕಾರವಾರ: ಕೆಲವು ದಿನಗಳ ಹಿಂದೆ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದಂತೆ ಯುವ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಸೇರಿ ಇಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್‌ ಅಶೋಕ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.

ಯುವಮೋರ್ಚಾ ನಗರ ಘಟಕದ ಎಲ್ಲ ಸದಸ್ಯರೊಂದಿಗೆ ಗೋವಾಗೆ ತೆರಳಿದ ಶುಭಂ ಕಳಸ್ ಸಿಎಂಗೆ ಸ್ವಾಗತ ಕೋರಿ ಕ್ಷಮೆ ಯಾಚಿಸಿದರು. ಆಗ ಸಿಎಂ ಯುವಮೋರ್ಚಾ ಅಂದರೆ ನಮ್ಮ ಮನೆ ಹುಡುಗರು ಹೀಗಾಗಿ ಕ್ಷಮೆ ಕೇಳೋ ಮಾತೇ ಇಲ್ಲ ಎಂದು ಆಶೀರ್ವಾದ ಮಾಡಿದರು.